Saturday, March 11, 2017

INFORMATION - NEW DAKSHINA KANNADA DISTRICT POLICE WEBSITE

  • ದಿನಾಂಕ 11-03-2017 ರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ನ ನೂತನ ವೆಬ್ ಸೈಟನ್ನು ಪ್ರಾರಂಭಿಸಲಾಗಿದ್ದು, ಇನ್ನು ಮಂದೆ ಅಪರಾಧ ವರದಿಗಳು ಹಾಗೂ ಜಿಲ್ಲಾ ಪೊಲೀಸ್‌ನ ಇನ್ನಿತರೇ ವಿಷಯಗಳು ಈ ವೆಬ್ ಸೈಟ್ ನಲ್ಲಿ ಸಿಗುತ್ತದೆ.

Friday, March 10, 2017

Daily Crime Reports as on 10/03/2017 at 18:00 Hrs

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 10/03/2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ  ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.

Daily Crime Reports as on 10/03/2017 at 10:00 Hrs

ಕಳವು ಪ್ರಕರಣ: ೦1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್‌ ರಫೀಕ್‌ ಪ್ರಾಯ 32 ತಂದೆ:ಅಬ್ದುಲ್ಲಾ ವಾಸ:ಆದರಶ್ ನಗರ ಮನೆ 34ನೇ ನೆಕ್ಕಿಲಾಡಿ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 09-03-2017 ರಂದು ಬೆಳಗ್ಗೆ 07-30 ಗಂಟೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಶೆಣೈ ಆಸ್ಪತ್ರೆಯ ಮುಂಬಾಗದ ರಾಯಲ್‌ ಕಾಂಪ್ಲೆಕ್ಸ ನಲ್ಲಿನ ಸಿಟಿ ಮೊಬೈಲ್ ಅಂಗಡಿಗೆ ಬಂದು, ಅಂಗಡಿಯನ್ನು ತೆರೆದು ಅಂಗಡಿಯ ಒಳಭಾಗದಲ್ಲಿ ಕಸವನ್ನು ಸ್ವಚ್ಚ ಮಾಡುತ್ತಿರುವ ಸಮಯ ಎಂದಿನಂತೆ ಮಂಗಳೂರಿನ ಆದಿಶಕ್ತಿ ಪಾರ್ಸೆಲ್ ನವರು ಬಂದು, ಅರಸಿನಮಕ್ಕಿ ಸಸ್ಪೆನ್ಸ್ ಮೊಬೈಲ್ ಅಂಗಡಿಯ

Thursday, March 09, 2017

Daily Crime Reports as on 09/03/2017 at 18:00 Hrs

ಅಸ್ವಾಭಾವಿಕ ಮರಣ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪ್ರೇಮಲತಾ ಗಂಡ: ನಾಗೇಶ್ವರನ್ ವಾಸ: ಬೆಟಗೇರಿ ಮನೆ, ಸೂಂಟಿಕೊಪ್ಪ ಮಡಿಕೇರಿ ರವರು ದಿನಾಂಕ:22.02.2017 ರಂದು ಗಂಡನ ಮನೆಯಿಂದ ತವರು ಮನೆಯಾದ ಪುತ್ತೂರು ತಾಲೂಕು ಐತ್ತೂರು ಗ್ರಾಮದ ಓಟೆಕಜೆ ಬಂದಿದ್ದು, ಪಿರ್ಯಾದಿದಾರರ ತಂದೆ ಸುಬ್ರಮಣ್ಯ ರವರು ದಿನಾಂಕ 28.02.2017 ರಂದು ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದಾಗ ವಾಂತಿ ಮಾಡುತ್ತಿದ್ದುದ್ದನ್ನು ಕಂಡು ಪಿರ್ಯಾದಿದಾರರು ತಂದೆ

Daily Crime Reports as on 09/03/2017 at 10:00 Hrs

ಅಪಘಾತ ಪ್ರಕರಣ: 2
  • ಧರ್ಮಸ್ಥಳ ಪೊಲೀಸ್ ಠಾಣೆದಿನಾಂಕ 21-02-2017 ರಂದು ಟಾಟಾ ಎಸ್ ವಾಹನ ನಂ ಕೆ ಎ 46-3066 ನೇದರ ಅದರ ಚಾಲಕನು ತರೀಕೆರೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಚಾರ್ಮಾಡಿ ಘಾಟಿ ರಸ್ತೆಯ 2ನೇ ತಿರುವಿನ ಬಳಿ ರಾತ್ರಿ 11.30 ಗಂಟೆಗೆ ತನ್ನ ಬಾಬ್ತು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿದ ಪರಿಣಾಮವಾಗಿ ಘಾಟಿ ಇಳಿಜಾರು ರಸ್ತೆಯಲ್ಲಿ ವಾಹನವು ಚಾಲಕನ ನಿಯಂತ್ರಣ